ಸುಗೂರ (ಎನ್) ಶ್ರೀ ಮಠದಲ್ಲಿ ಜನ್ಮದಿನದ ಸಂಭ್ರಮ: ಜನವರಿ 3ರಂದು 1008 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ

ಚಿತ್ತಾಪುರ: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ (ಎನ್) ಗ್ರಾಮದ ಶ್ರೀ ಭೋಜಲಿಂಗೇಶ್ವರ ಮಠದಲ್ಲಿ ಇದೇ ಜನವರಿ 3ರ ಶನಿವಾರದಂದು ವಿಶೇಷ ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ದಿವ್ಯ ನೇತೃತ್ವದಲ್ಲಿ, ಅವರ ಸುಪುತ್ರರಾದ ಅಭಿನವ ಡಾ. ಕುಮಾರ ಭೋಜರಾಜ ಅವರ 30ನೇ ವರ್ಷದ ಜನ್ಮದಿನೋತ್ಸವದ ನಿಮಿತ್ತ ಈ ಸಂಭ್ರಮಾಚರಣೆ ನಡೆಯಲಿದೆ.


ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು: ಅಂದು ಸಂಜೆ 5 ಗಂಟೆಗೆ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ದಿವ್ಯ ಸಾನಿಧ್ಯದಲ್ಲಿ '1008 ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ' ಹಾಗೂ ಶ್ರೀಗಳಿಗೆ ತುಲಾಭಾರ ಸೇವೆ ನೆರವೇರಲಿದೆ. ನಾಡಿನ ವಿವಿಧ ಮಠಾಧೀಶರು ಹಾಗೂ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಹಂಪನಗೌಡ ಭಕ್ತರಿಂದ ತುಲಾಭಾರ ಸೇವೆ ಹಾಗೂ ಸುಗೂರ (ಎನ್) ಗ್ರಾಮದ ಭಕ್ತರಿಂದ ಕೇಕ್ ಸೇವೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಸಮಾಜಮುಖಿ ಸೇವೆಗಳು: ಜನ್ಮದಿನದ ಅಂಗವಾಗಿ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆಯವರೆಗೆ ಶ್ರೀ ಮಠದ ಆವರಣ ಅಥವಾ ಕಲ್ಯಾಣ ಮಂಟಪದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ. ಕಲಬುರಗಿಯ ಸ್ಟಾರ್ ಕೇರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಸ್ಟಾರ್ ಲೈಫ್ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಯಾದಗಿರಿಯ ವೇದಾ ಕಣ್ಣಿನ ಆಸ್ಪತ್ರೆ ಹಾಗೂ ನವಜೀವನ ರಕ್ತದಾನ ಕೇಂದ್ರದ ಸಹಯೋಗದೊಂದಿಗೆ ಈ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಬಿ.ಪಿ, ಶುಗರ್, ಮೊಣಕಾಲು ಕೀಲು ನೋವು, ಕಣ್ಣಿನ ತಪಾಸಣೆ, ಮಕ್ಕಳ ತಜ್ಞರ ಸೇವೆ ಹಾಗೂ ಗರ್ಭಿಣಿಯರಿಗೆ ವಿಶೇಷ ತಪಾಸಣೆ ಲಭ್ಯವಿರಲಿದೆ. ಇದರೊಂದಿಗೆ ಶ್ರೀ ಭೋಜಲಿಂಗೇಶ್ವರ ಮಠದ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಶಾಲಾ ಮಕ್ಕಳಿಗೆ ಹಡಪದ ಅಪ್ಪಣ್ಣ ಸಮಾಜದ ಸೇವಕ ಮಲ್ಲಿಕಾರ್ಜುನ ಬಿ. ಹಡಪದ ಅವರಿಂದ ಉಚಿತ ಕ್ಷೌರ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ.

ಆಮಂತ್ರಣ: ಈ ಸಮಾಜಮುಖಿ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಊರಿನ ಪ್ರಮುಖರಾದ ಶರಣಗೌಡ ಬೆನಕನಹಳ್ಳಿ, ಭೀಮರೆಡ್ಡಿ ಗೌಡ ಕುರಾಳ, ವಿಶ್ವನಾಥ ರೆಡ್ಡಿ ಪಾಟೀಲ್, ಈರಣ್ಣ ಬಲಕಲ್ (LIC ಯಾದಗಿರಿ), ಶಿಕ್ಷಕ ಶರಣಬಸಪ್ಪ ನಾಸಿ ಸರ್, ಸಿದ್ರಾಮರೆಡ್ಡಿ ಗೌಡ ಬೆನಕನಹಳ್ಳಿ, ಸಿದ್ದು ಗೌಡ ಕುರಾಳ ಹಾಗೂ ಮಲ್ಲಿಕಾರ್ಜುನ ಬಿ. ಹಡಪದ ಅವರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.

Comments

Popular posts from this blog

ಕಲಬುರ್ಗಿ ಜಿಲ್ಲಾಧಿಕಾರಿಗಳ ವರ್ಗಾವಣೆಗೆ ರೈತ ಸಂಘದ ಒತ್ತಾಯ: ಅಸಮರ್ಥ ಆಡಳಿತದ ವಿರುದ್ಧ ಮಾಂತೇಶ್ ಜಮಾದಾರ್ ಆಕ್ರೋಶ

ಕರ್ನಾಟಕ ವಿಧಾನ ಸಭೆಯ ಪ್ರಮುಖ ಸಮಿತಿಗಳ ಅಧ್ಯಕ್ಷರು, ಸದಸ್ಯರ ನೇಮಕ: ಕೆ. ಮಹದೇವ್, ಎಸ್‌. ರಾಜಣ್ಣ ಸಾರಥ್ಯ

ಪ್ರತಿ ಟನ್‌ ಕಬ್ಬಿಗೆ ₹3,300 ದರ ಆಗ್ರಹಿಸಿ ಬೆಳೆಗಾರರ ತೀವ್ರ ಪ್ರತಿಭಟನೆ