ರಾಯಚೂರು ಜಿಲ್ಲೆಯ ಏಳು ಸಾಧಕರಿಗೆ 'ವೀರ ಕನ್ನಡಿಗ' ರಾಜ್ಯ ಪ್ರಶಸ್ತಿ: ಡಿ.29 ರಂದು ಯಾದಗಿರಿಯಲ್ಲಿ ಪ್ರದಾನ
ಲಿಂಗಸುಗೂರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ರಾಯಚೂರು ಜಿಲ್ಲೆಯ ಏಳು ಜನ ಸಾಧಕರು 2025ನೇ ಸಾಲಿನ ಪ್ರತಿಷ್ಠಿತ 'ವೀರ ಕನ್ನಡಿಗ' ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ವಿಶ್ವಮಾನವ ರಾಷ್ಟ್ರಕವಿ ಕುವೆಂಪು ವೇದಿಕೆ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ (ರಿ) ಬೆಂಗಳೂರು ಹಾಗೂ 'ನಮ್ಮೂರ ಶಾಸಕರು' ರಾಷ್ಟ್ರೀಯ ಕನ್ನಡ ಪತ್ರಿಕೆಯ ಆಶ್ರಯದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇದೇ ಡಿಸೆಂಬರ್ 29ರ ಸೋಮವಾರ ಬೆಳಿಗ್ಗೆ 10:45ಕ್ಕೆ ಯಾದಗಿರಿ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದ ವಿವರ:
ಲಿಂಗಸುಗೂರಿನ ಸಾಹಿತಿ ಹಾಗೂ ಪತ್ರಕರ್ತ ಡಾ. ಜಲಾಲುದ್ದೀನ್ ಅಕ್ಬರ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಯಾದಗಿರಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಶ್ರೀ ಸಿದ್ದಪ್ಪ ಹೂಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಷೇತ್ರದ ಜನಪ್ರಿಯ ಶಾಸಕರಾದ ಚನ್ನರೆಡ್ಡಿ ಪಾಟೀಲ್ ತನ್ನೂರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕಾಂಗ್ರೆಸ್ ಧುರೀಣರಾದ ಮಾಣಿಕ್ಯ ರೆಡ್ಡಿ ಗೌಡ ದರ್ಶನಾಪೂರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ 'ಮೂಕ ನಾಯಕ' ಕಿರು ಚಲನಚಿತ್ರದ ಪೋಸ್ಟರ್ ಬಿಡುಗಡೆ ಕೂಡ ನೆರವೇರಲಿದೆ.
ಪ್ರಶಸ್ತಿ ಪುರಸ್ಕೃತರ ಪಟ್ಟಿ:
ರಾಯಚೂರು ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಪ್ರಶಸ್ತಿಗೆ ಭಾಜನರಾದವರು:
ಶಂಕರ್ ದೇವರು ಹಿರೇಮಠ್ – ಸಾಹಿತಿಗಳು, ಸಿಂಧನೂರು.
ನಜೀರ್ ಅಹ್ಮದ್ – ಅಧ್ಯಕ್ಷರು, ಬ್ಲೂ ಬರ್ಡ್ ಚಾರಿಟೇಬಲ್ ಟ್ರಸ್ಟ್, ಲಿಂಗಸುಗೂರು.
ದೇವಪ್ಪ ಮಸ್ಕಿ – ಸಮಾಜ ಸೇವಕರು, ಹಟ್ಟಿ ಚಿನ್ನದ ಗಣಿ.
ಅಬ್ದುಲ್ ರಶೀದ್ – ತಾಲೂಕು ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ, ಲಿಂಗಸುಗೂರು.
ವಿಜಯ ಪೋಳ – ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕೆ.ಆರ್.ಎಸ್ ಪಕ್ಷ, ರಾಯಚೂರು.
ಎಸ್. ನಜೀರ್ ಮಸ್ಕಿ – ಪತ್ರಕರ್ತರು, ರಾಯಚೂರು.
ಮಾರುತಿ ಗೋಸ್ಲೆ – ಜಿಮ್ ಮಾಸ್ಟರ್, ಕರಡಕಲ್.
ಆಯ್ಕೆಯಾದ ಸಾಧಕರಿಗೆ ಸಾರ್ವಜನಿಕ ಸಮ್ಮುಖದಲ್ಲಿ ಗೌರವಪೂರ್ವಕವಾಗಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಡಾ. ಜಲಾಲುದ್ದೀನ್ ಅಕ್ಬರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments
Post a Comment