ಕಲಬುರಗಿ ರೇಣುಕಾ ಯಲ್ಲಮ್ಮ ದೇವಿ ಹಾಗೂ ಪರಶುರಾಮ ಮಹಾಕಾರ್ಯದ ಅಂಗವಾಗಿ ವೈಭವದ ಮೆರವಣಿಗೆ

ಕಲಬುರಗಿ, ನ. 11:  ನಗರದ ಗಂಗಾ ನಗರದಲ್ಲಿರುವ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ರೇಣುಕಾ ಯಲ್ಲಮ್ಮ ದೇವಿ ಹಾಗೂ ಪರಶುರಾಮರ ಮಹಾಕಾರ್ಯ ಪೂಜೆಯ ಅಂಗವಾಗಿ ಇಂದು (ನ. 11) ವೈಭವದ ಉತ್ಸವ ಮೂರ್ತಿಯ ಮೆರವಣಿಗೆ ಜರುಗಿತು.
ರೇಣುಕಾ ಯಲ್ಲಮ್ಮ ದೇವಿ ತರುಣ ಸಂಘ ಮತ್ತು ನಿಜ ಶರಣ ಅಂಬಿಗರ ಚೌಡಯ್ಯ ಜೀರ್ಣೋದ್ಧಾರ ಸಂಘದ ವತಿಯಿಂದ ಈ ಮಹಾಕಾರ್ಯವನ್ನು ಆಯೋಜಿಸಲಾಗಿತ್ತು.
ಯಾತ್ರೆಗೆ ಚಾಲನೆ:
ಬೆಳಿಗ್ಗೆ, ಕೆರೆಯಲ್ಲಮ್ಮ ದೇವಸ್ಥಾನದಿಂದ ಪ್ರಾರಂಭಗೊಂಡ ಉತ್ಸವ ಮೂರ್ತಿಯ ಮೆರವಣಿಗೆಗೆ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ಚಾಲನೆ ನೀಡಿದರು.
ಮೆರವಣಿಗೆಯಲ್ಲಿ 101 ಮುತ್ತೈದೆಯರ ಕಲಶ, ಭಾಜ ಭಜಂತ್ರಿ, ಡೊಳ್ಳು ಮತ್ತು ಹಲಗೆ ವಾದನಗಳು ಮೆರುಗು ನೀಡಿದವು. ಗೋವಾ ಹೋಟೆಲ್ ಮಾರ್ಗವಾಗಿ ಲಾಲ್ ಗಿರಿ ಕ್ರಾಸ್ ಮೂಲಕ ಸಾಗಿದ ಮೆರವಣಿಗೆ ಮಧ್ಯಾಹ್ನ 3:00 ಗಂಟೆಗೆ ಗಂಗಾ ನಗರದ ರೇಣುಕಾ ಯಲ್ಲಮ್ಮ ದೇವಿ ಮಂದಿರವನ್ನು ತಲುಪಿತು.
ಪ್ರಮುಖ ಗಣ್ಯರ ಭಾಗಿ:
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಕಾಶ ಬೆನಕನಹಳ್ಳಿ, ನಗರ ಬಿಜೆಪಿ ಅಧ್ಯಕ್ಷರಾದ ಚಂದು ಪಾಟೀಲ್, ಕೋಲಿ ಸಮಾಜದ ಮುಖಂಡರಾದ ಲಚ್ಚಪ್ಪ ಜಮಾದಾರ್, ಶಾಂತಪ್ಪ ಕೂಡಿ, ಅಮೃತ ಡಿಗ್ಗಿ, ರಾಯಪ್ಪ ಹುನಗುಂಟಿ, ವಿಜಯ್ ಕುಮಾರ್ ಹದ್ಗಲ್ ಸೇರಿದಂತೆ ಅನೇಕ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ಧಾರ್ಮಿಕ ಕಾರ್ಯಕ್ರಮಗಳು:
ದೇಗುಲ ತಲುಪಿದ ನಂತರ, ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಮೂರ್ತಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿತು.
ಈ ಮಹಾಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರೀ ರೇಣುಕಾ ಯಲ್ಲಮ್ಮ ದೇವಿಯ ತರುಣ ಸಂಘದ ಅಧ್ಯಕ್ಷರಾದ ಅನಿಲ್ ಕೂಡಿ, ಉಪಾಧ್ಯಕ್ಷರಾದ ರಮೇಶ್ ಬಾಗ್ನಳ್ಳಿ ಮತ್ತು ಇತರ ಪದಾಧಿಕಾರಿಗಳಾದ ಶ್ರೀಕಾಂತ್ ಆಲೂರು, ಅಶೋಕ್ ಬಿದ್ನೂರ್, ಅರುಣ್ ಕೂಡಿ, ಉಮೇಶ್ ಹಡಗಲ್, ಶರಣು ಕವಲಗಿ, ಶ್ಯಾಮ್ ಕೋಬಾಳ, ಸುರೇಶ ಹದ್ಗಲ್, ಪ್ರಕಾಶ್ ನಂದಳ್ಳಿ, ಶರಣು ಕೂಡಿ, ಬಾಬುಷ ಕೂಡಿ, ಸಂತೋಷ್ ಹುಳಗೇರಿ, ಶಾಮರಾವ್ ಸುಲ್ತಾನಪೂರ, ಅರ್ಜುನ್ ಹವನುರ್, ಜಗನ್ನಾಥ್ ಭೀಮಳ್ಳಿ ಹಾಗೂ ಅನೇಕ ಯುವಕರು ಮತ್ತು ನೂರಾರು ಮಹಿಳೆಯರು ಸಕ್ರಿಯವಾಗಿ ಭಾಗವಹಿಸಿದ್ದರು.

Comments

Popular posts from this blog

ಕಲಬುರ್ಗಿ ಜಿಲ್ಲಾಧಿಕಾರಿಗಳ ವರ್ಗಾವಣೆಗೆ ರೈತ ಸಂಘದ ಒತ್ತಾಯ: ಅಸಮರ್ಥ ಆಡಳಿತದ ವಿರುದ್ಧ ಮಾಂತೇಶ್ ಜಮಾದಾರ್ ಆಕ್ರೋಶ

ಕರ್ನಾಟಕ ವಿಧಾನ ಸಭೆಯ ಪ್ರಮುಖ ಸಮಿತಿಗಳ ಅಧ್ಯಕ್ಷರು, ಸದಸ್ಯರ ನೇಮಕ: ಕೆ. ಮಹದೇವ್, ಎಸ್‌. ರಾಜಣ್ಣ ಸಾರಥ್ಯ

ಪ್ರತಿ ಟನ್‌ ಕಬ್ಬಿಗೆ ₹3,300 ದರ ಆಗ್ರಹಿಸಿ ಬೆಳೆಗಾರರ ತೀವ್ರ ಪ್ರತಿಭಟನೆ